ಉಪ್ಪಿನಬೆಟಗೇರಿ: ಸೇವಾಭಾವದಿಂದ ಸ್ವಚ್ಛತಾ ಕಾರ್ಯನಿರ್ವಹಿಸಿ ಜನರ ಮನಸು ಗೆಲ್ಲಬೇಕು. ಆಗಮಾತ್ರ ಶಿಬಿರಗಳಿಗೆ ಮಹತ್ವ ಬರುತ್ತದೆ ಎಂದು ಗರಗದ ಶ್ರೀ ಗುರು ಮಡಿವಾಳೇಶ್ವರ ಕಲ್ಮಠದ ನಿಯೋಜಿತ ಉತ್ತರಾಧಿಕಾರಿ ಶ್ರೀ ಪ್ರಶಾಂತ ದೇವರು ಹೇಳಿದರು. ಧಾರವಾಡ ತಾಲೂಕಿನ ದುಬ್ಬನಮರಡಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ కవివి ರಾಷ್ಟ್ರೀಯ ಸೇವಾ ಯೋಜನೆ ಕೋಶ, ಗರಗದ ಚನ್ನಬಸವ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ, ಜಿಪಂ, ತಾಪಂ ಹಾಗೂ ಹಂಗರಕಿ ಗ್ರಾಪಂ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ.ಬಿ. ದೇಸಾಯಿ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು. ಧಾರವಾಡ ತಾಲೂಕಿನ ದುಬ್ಬನಮರಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕವಿವಿ ಎನ್‌ಎಸ್‌ಎಸ್ ಘಟಕದ ವಿಶೇಷ ಶಿಬಿರವನ್ನು ಮಾಜಿ ಶಾಸಕ ಎ.ಬಿ. ದೇಸಾಯಿ ಉದ್ಘಾಟಿಸಿದರು. ಶ್ರೀ ಪ್ರಶಾಂತ ದೇವರು, ವಿಠಲ ಪೂಜಾರ, ಸೋಮನಿಂಗಪ್ಪ ಅಂಗಡಿ, ಇತರರಿದ್ದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ವಿಠಲ ಪೂಜಾರ ಮಾತನಾಡಿ, ನಮ್ಮ ಗ್ರಾಮದಲ್ಲಿ ಶಿಬಿರ ಆಯೋಜಿಸಿ ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಿರುವುದು ಸಂತಸದ ಸಂಗತಿ ಎಂದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಸೋಮನಿಂಗಪ್ಪ ಅಂಗಡಿ, ಗರಗ ಎಸ್‌ಜೆಎಂಕೆ ಟ್ರಸ್ಟ್ ಆಡಳಿತಾಧಿಕಾರಿ ಎಸ್. ಎಸ್. ಮುಖಯ್ಯನಮಠ, ಕಾಲೇಜ್ ಆಡಳಿತಮಂಡಳಿ ಸದಸ್ಯ ಕಿರಣ ಬುಲಬುಲೆ ಮಾತನಾಡಿದರು. ಚನ್ನಬಸಪ್ಪ ಕಿತ್ತೂರ, ಪಿಡಿಒ ಅಪ್ಪಯ್ಯ ಬೀಡಿಮಠ, ಪ್ರಾಚಾರ್ಯ ಬಸವರಾಜ ಕಮ್ಮಾರ, ಎ.ವೈ. ಹುಣಶ್ಯಾಳ, ವಿದ್ಯಾಧರ ಕಲಬುರ್ಗಿ, ವೀರೇಂದ್ರ ಜೋಗಿ, ಆರಕ್ಷಕ ಎಸ್.ಎಫ್. ನದಾಫ್, ಮಡಿವಾಳಪ್ಪ ಕೆಲಗೇರಿ, ಪೂಜಾ ವನಹಳ್ಳಿ, ಅಕ್ಷತಾ ಜೈನರ, ಶಿಬಿರಾರ್ಥಿಗಳಿದ್ದರು.

